Thursday, January 22, 2009

ಕಟಪಯಾದಿ ಸೂತ್ರದಿಂದ ಮೆಳರಾಗ ಮೂರ್ಚನೆ


ಸುತ್ರವು ವ್ಯಂಜನಗಳನ್ನು ಸಂಖ್ಯಾ ರೂಪದಲ್ಲಿ ಪ್ರತಿನಿಧಿಸಲು ಒಂದು ಸಾಧನ - ಕಂಪ್ಯೂಟರ್ ಭಾಷೆಯಲ್ಲಿ ಇದನ್ನು hashing ಅನ್ನುವರು.

ಸೂತ್ರದ ಸಾರಾಂಶ ಕೆಳಗಿನ ವಾಕ್ಯದಲ್ಲಿದೆ

ಕಾದಿ ನವ ಟಾದಿ ನವ ಯಾದಿ ಅಷ್ಟ ಪಾದಿ ಪಂಚ ಯಾದಿ ಅಷ್ಟ

ಅಂದರೆ ಇ೦ದ ಒಂಬತ್ತು, ಇಂದ ಒಂಬತ್ತು, ಇಂದ ಐದು , ಯಾ ಇಂದ ಎಂಟು ರೀತಿಯಾಗಿ ವ್ಯಂಜಗಳಿಗೆ ಸಂಖ್ಯೆಗಳನ್ನು ಹೊಂದಿಸಬೇಕು. ಮದ್ಯ ಉಳಿಯುವ ಅನುನಾಸಿಕ - ಞನ - ಗಳಿಗೆ ಶೂನ್ಯವನ್ನು ಹೊಂದಿಸಬೇಕು.

ಸೂತ್ರವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇಳಕರ್ತ ರಾಗಗಳನ್ನು ಹೆಸರಿಸಲು ಹಾಗು ಕ್ರಮಬದ್ಧವಾಗಿ ಯೋಜಿಸಲು ಉತ್ತಮವಾಗಿ ಬಳಸಲಾಗಿದೆ.

ಯಾವುದೇ ಒಂದು ಮೇಳಕರ್ತ ರಾಗದ ಹೆಸರಿನ ಮೊದಲ ಎರಡು ವ್ಯಂಜನಗಳ ಸಂಖ್ಯೆಗಳನ್ನು ಕಟಪಯಾದಿ ಸೂತ್ರದಂತೆ ಬರೆದು ಅದನ್ನು ಬಲದಿಂದ ಎಡಕ್ಕೆ ಓದಿದರೆ ರಾಗದ ಕ್ರಮ ಸಂಖ್ಯೆ ಅಗತ್ತದೆ. ಮೇಳಕರ್ತ ರಾಗಗಳ ರೀತಿಯಾಗಿ ಹೆಸರಿಸಿ ಅನುಕ್ರಮವಾಗಿ ಯೋಜಿಸಲಾಗಿದೆ.

ಉದಾಹರಣೆಗೆ -
. ಮಾಯಾಮಳವಗುಳ - ಮೊದಲ ಅಕ್ಷರ '' - ಸಂಖ್ಯೆ -
ಎರಡ್ನೇ ಅಕ್ಷರ 'ಯಾ' - ಸಂಖ್ಯೆ - ೧
ಮೇಳಕರ್ತ ಸಂಖ್ಯೆ - ೧೫

. ನಾಸಿಕಾಭೂಷಿಣಿ - ಮೊದಲ ಅಕ್ಷರ '' - ಸಂಖ್ಯೆ -
ಎರಡ್ನೇ ಅಕ್ಷರ 'ಸ' - ಸಂಖ್ಯೆ -೭
ಮೇಳಕರ್ತ ಸಂಖ್ಯೆ - ೭೦

ಮೇಳಕರ್ತ ರಾಗಗಳನ್ನು ಸೂತ್ರದಂತೆ ಯೋಜಿಸಿರುವದರಿಂದ ಯಾವುದೇ ಮೇಳರಾಗದ ಮೂರ್ಚನೆಯನ್ನು ಕಂಡುಹಿಡಿಯಲು ಸುಲಭವಾಗಿದೆ.

೭೨ ರಾಗಗಳನ್ನು ರಾಗಗಳ ೧೨ ಚಕ್ರಗಳಾಗಿ ವಿಂಗಡಿಸಲಾಗಿದೆ. ಮೊದಲ ಚಕ್ರಗಳು ಶುದ್ಧ ಮಧ್ಯಮ ನಂತರದ ಚಕ್ರಗಳು ಪ್ರತಿ ಮಧ್ಯಮ ರಾಗಗಳು. ಒಂದೇ ಚಕ್ರದಲ್ಲಿ ಇರುವ ರಾಗಗಳು ಕೇವಲ ದೈವತ, ನಿಶಾದಗಳಲ್ಲಿ ಮಾತ್ರ ವ್ಯತ್ಯಾಸವನ್ನು ಹೊಂದಿರುತ್ತವೆ.

ಶುದ್ಧ, ಚತುರಶ್ರ, ಷಟ್ಶ್ರುತಿ ದೈವತಗಳು ಹಾಗು ಶುದ್ಧ, ಕೈಶಿಕಿ, ಕಾಕಲಿ ನಿಷಾದಗಳನ್ನು ಕ್ರಮವಾಗಿ ,, ಇಂದ ಗುರುತಿಸಿದರೆ ಎರಡು ಸ್ವರಗಳು ಒಂದು ಚಕ್ರದಲ್ಲಿ ರೀತಿ ಬರುತ್ತವೆ
೧. ಚಕ್ರದ ಮೊದಲನೆ ರಾಗ - ೧,೧
೨. ಎರಡನೇ - ೧,೨
೩. ಮೂರನೇ -೧.೩
೪. ನಾಲ್ಕನೇ - ೨,೨
೫. ಐದನೇ - ೨,೩
೬. ಆರನೇ - ೩,೩

ಇದೆ ರೀತಿ ಶುದ್ಧ(), ಚತುರಶ್ರ(), ಷಟ್ಶ್ರುತಿ() ರಿಷಭಗಳು ಹಾಗು ಶುದ್ಧ(), ಸಾಧಾರಣ(), ಅಂತರ() ಗಾಂಧರಗಳು ಒಂದು ಚಕ್ರದಿಂದ ಮತ್ತೊಂದಕ್ಕೆ ಬದಲಾಗುತ್ತವೆ.
೧. ಮೊದಲನೆ ಚಕ್ರದ ಎಲ್ಲ ರಾಗಗಳು - ೧,೧
. ಎರಡನೇ - ,
೩. ಮೂರನೇ - ೧,೩
೪. ನಾಲ್ಕನೇ - ೨,೨
೫. ಐದನೇ - ೨,೩
೬. ಆರನೇ - ೩,೩

ಏಳರಿಂದ ಹನ್ನೆರಡನೇ ಚಕ್ರದವರೆಗೂ ಮೇಲಿನ ಕ್ರಮವೇ ಪುನರಾವರ್ತಿಸುತ್ತದೆ.

ಯಾವುದೇ ಮೇಳ ರಾಗದ ಸ್ವರಗಳನ್ನು ಕ್ರಮದಿಂದ ಸುಲಭವಾಗಿ ತಿಳಿಯಬಹುದು.

ಉದಾಹರಣೆಗೆ - ಗಮನಶ್ರಮ -
ಗ - ೩, ಮ -೫ ಮೇಳ ಸಂಖ್ಯೆ - ೫೩

೧.ಇದು ೩೬ಕ್ಕಿನ್ತ ಹೆಚ್ಚು ಆದ್ದರಿಂದ - ಪ್ರತಿ ಮಧ್ಯಮ
.ಇದು ೯ತ್ತನೆ ಚಕ್ರದಲ್ಲಿ ಬರುವುದರಿಂದ - ಶುದ್ಧ ರಿಷಭ, ಅಂತರ ಗಾಂಧಾರ
೩.ಚಕ್ರದ ೫ ರಾಗವಾದ್ದರಿಂದ - ಚತುಶ್ರುತಿ ದೈವತ, ಕಾಕಲಿ ನಿಶಾದ

ಇದೇ ಕ್ರಮವನ್ನು ಒಂದು algorithm ನಂತೆ ಬೇರೆಯ ಬಹುದು.
೫೩ ಅನ್ನು ಇನ್ದ ಭಾಗಿಸಿ. ಭಾಗಳಬ್ಧಕ್ಕೆ() ಒಂದನ್ನು ಸೇರಿಸಿದರೆ (೯) ಚಕ್ರದ ಸಂಖ್ಯೆಯನ್ನು, ಶೇಷವು() ಚಕ್ರದಲ್ಲಿ ರಾಗದ ಸಂಖ್ಯೆಯನ್ನು ತಿಳಿಸುತ್ತದೆ. ಶೇಷವು ಆದರೆ ಎಂದು ಪರಿಗಣಿಸಬಹುದು. ಎರಡು ಸಂಖ್ಯೆಗಳನ್ನು ಮೇಲಿನ ಕೋಷ್ಟಕಕ್ಕೆ ಹೊಂದಿಸಿದರೆ ರಾಗದ ಸ್ವರಗಳು ದೊರೆಯುತ್ತವೆ.

No comments: